3 ಹೊಸ ಕಾನೂನು: ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ 550 ಪೊಲೀಸರು ಭಾಗಿ! ರಾಮಯ್ಯ ಕಾನೂನು ಕಾಲೇಜು ಮತ್ತು ಜಸ್ಟೀಸ್‌ ಇ.ಎಸ್‌.ವೆಂಕಟರಾಮಯ್ಯ ಗ್ಲೋಬಲ್‌ ಲೀಗಲ್‌ ಸ್ಕಿಲ್ಸ್‌ ಅಕಾಡೆಮಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘3 ಹೊಸ ಕ್ರಿಮಿನಲ್‌ ಕಾನೂನುಗಳ’ ಕುರಿತು ಪೊಲೀಸರಿಗೆ ತರಬೇತಿ ನೀಡಲಾಯಿತು. ಬೆಂಗಳೂರು: ರಾಮಯ್ಯ ಕಾನೂನು ಕಾಲೇಜು ಮತ್ತು ಜಸ್ಟೀಸ್‌ ಇ.ಎಸ್‌.ವೆಂಕಟರಾಮಯ್ಯ ಗ್ಲೋಬಲ್‌ ಲೀಗಲ್‌ ಸ್ಕಿಲ್ಸ್‌ ಅಕಾಡೆಮಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘3 ಹೊಸ ಕ್ರಿಮಿನಲ್‌ ಕಾನೂನುಗಳ’ ಕುರಿತು ಪೊಲೀಸರಿಗೆ ತರಬೇತಿ ನೀಡಲಾಯಿತು.ಪ್ರಸ್ತುತ ಸಂದರ್ಭಗಳಿಗೆ ತಕ್ಕಂತೆ ಸರ್ವರಿಗೂ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮೂರು ಹೊಸ ಕಾನೂನು ರೂಪಿಸಿದ್ದು, ಇವುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ.ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತರಬೇತಿ ಶಿಬಿರದಲ್ಲಿ 550ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದು, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಈಶ್ವರ್‌ ಎಸ್.ಅಂಟಿನ್, ಎಸ್‌ಬಿಎನ್‌ ಪ್ರಕಾಶ್, ಡಿ.ಆರ್. ವೆಂಕಟ ಸುದರ್ಶನ್ ಅವರು ಮೂರು ಹೊಸ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.‘ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಾಗುತ್ತಿದೆ. ಜೊತೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯೂ ಜಾರಿಗೆ ಬರಲಿದೆ’ ಎಂದು ತಿಳಿಸಿದರು.